
ಬರಹ : ಶ್ರೀಕಾಂತ್ ಶ್ರೀಕಿ
ಸದಾ ನಗುವಿನ ಸದ್ದು ಕೇಳುತ್ತಿದ್ದ ಜನಸ್ನೇಹಿ ಆಶ್ರಮ ಅದೇಕೋ ಅಕ್ಷರಶಃ ಮೌನವಾಗಿತ್ತು.
ಎಲ್ಲರ ಕಣ್ಣಲಿಯೂ ನೀರಿತ್ತು.
ಮಾತು ಬಾರದೆ ಗಂಟಲು ಒಣಗುತ್ತಿತ್ತು.
ಕಾರಣ
ಟಿ ವಿ ಯಲ್ಲಿ ಬಂದ “ಅಪ್ಪು ಇನ್ನಿಲ್ಲ” ಎಂಬ ಸುದ್ದಿ ನಿರಾಶ್ರಿತರ ಕಣ್ಣೀರ ಹನಿಗೆ ಕಾರಣವಾಗಿತ್ತು.
ತಮ್ಮ ಮುಂದೆಯೇ ಸಿನಿಮಾ ರಂಗದಿ ಆಡಿ, ಬೆಳೆದ ಮಗು ತಮಗಿಂತ ಮುಂಚೆಯೇ ಅಪ್ಪುವನ್ನು ದೇವರು ತನ್ನ ಸ್ವಾರ್ಥದಿಂದ ಬಹುಬೇಗ ಅಪ್ಪಿಕೊಂಡುಬಿಟ್ಟಿದ್ದಾನೆಂದು.
ಅರಿಗಿಸಿಕೊಳ್ಳಲಾಗದ ದುಃಖವ ಮನದಲೇ ಕರಗಿಸುತ್ತಾ 2022 ದೀಪಗಳ ನುಡಿ ನಮನವನ್ನು ಸಲ್ಲಿಸಿದ್ರು ಜನಸ್ನೇಹಿ ಯೋಗೇಶ್ ಹಾಗೂ ಆಶ್ರಮದ ದೇವರ ಮಕ್ಕಳು.
ಕತ್ತಲ್ಲಲ್ಲಿರುವವರಿಗೆ ಸದಾ ಬೆಳಕಾಗುತ್ತಿದ್ದ ಅಪ್ಪು, ಅಂದು ಆಶ್ರಮದ ಕತ್ತಲ ಕಳೆದು 2022 ದೀಪಗಳಿಂದ ಕಂಗೊಳಿಸಿದ್ರು. ಅಂದು ದೀಪಗಳ ಬೆಳಕಲ್ಲಿ ನಿಮ್ಮನಿರಿಸಿ ಕಣ್ಣೀರ ಕತ್ತಲಲ್ಲಿ ದಿನಕಳೆದ್ರು ದೇವರ ಮಕ್ಕಳು.

3 ದಿನಗಳ ಕಾಲ ನಿಮ್ಮ ದರ್ಶನಕ್ಕೆ ಅವಕಾಶವಿತ್ತಾದರೂ ನಿರಾಶ್ರಿತರಿಗೆ ನಿಮ್ಮ ನೋಡಬೇಕೆಂಬ ಆ ಬಯಕೆ ನನ್ನಿಂದ ಈಡೇರಿಸಲಾಗಲಿಲ್ಲ ಕಾರಣ ನಿಮ್ಮನ್ನು ಕಾಣಲು ಬಂದಿದ್ದು ಕೋಟ್ಯಾಂತರ ಜನಸಾಗರ. ನೂರಾರು ನಿರಾಶ್ರಿತರನ್ನು ಅಲ್ಲಿಗೆ ಕರೆತಂದು ದರ್ಶನ ಮಾಡಿಸುವುದು ಈ ಬಡ ಟಾಕ್ಸಿ ಚಾಲಕ ಜನಸ್ನೇಹಿ ಯೋಗೇಶಗೆ ಅಸಾಧ್ಯವಾದ್ದದ್ದು…
ತದನಂತರ ಕಂಠೀರವ ಸ್ಟುಡಿಯೋ ಬಳಿ ಚಿರನಿದ್ರೆಯಲ್ಲಿದ್ದ ರಾಜಕುಮಾರನನ್ನು ಎದೆಳಿಸಲು ಬಂದದ್ದು ಅಸಂಖ್ಯಾತ ಜನಸಾಗರ.
ಹಣ್ಣಾಗಿ ಉದುರಿಹೋಗುವ ಹಿರಿಯ ಜೀವಗಳ ಆಸೆ ನಿಮ್ಮ ದಿವ್ಯ ಸ್ಥಾನವನ್ನೊಮ್ಮೆ ನೋಡಬೇಕೆಬುದಾಗಿತ್ತು,, ಅಷ್ಟರ ಮಟ್ಟಿಗೆ ಅವರನ್ನು ನೀವು ಅವರಿಸಿಬಿಟ್ಟಿದ್ದೀರಿ ಅಪ್ಪು.

ಕೊನೆಗೂ ಧೈರ್ಯ ಮಾಡಿ ದಿನಾಂಕ 10 ಶನಿವಾರ ನಿಮ್ಮ ದರ್ಶನಕ್ಕೆ ಸಿದ್ಧರಾಗಿ ಆಶ್ರಮದಿಂದ ಅವರನ್ನು ಕರೆತರಲು ಸಿದ್ಧನಾದೆ,
ಅವರ ಮನಗಳಲ್ಲಿ ಅವರದೇ ಮನೆಯ ಮಕ್ಕಳನೋ, ಅಣ್ಣ ತಮ್ಮ ನನ್ನೋ. ಬಂದುಗಳನ್ನೋ, ನೋಡಲು ಹೋಗುತ್ತಿರುವೆನು ಅನ್ನುವಷ್ಟರ ಮಟ್ಟಿಗೆ ರಾಜಕುಮಾರ ಅವರ ಪ್ರೀತಿಯನ್ನು ಗೆದ್ದುಬಿಟ್ಟಿದ್ರಿ..
ಕಣ್ಣು ಕಾಣದ ಮುಸಲ್ಮಾನರು ನಿಮ್ಮನ್ನು ನೋಡಬಯಸಿದ್ದು , ಇದಕ್ಕಿಂತ ನಿಮ್ಮ ಬಗ್ಗೆ ಹೇಳಲು ಇನ್ನೆನ್ನೂ ಬೇಕು.
ಕೈ ಕಾಲು ಆಗದ ಹಿರಿಜೀವಗಳನ್ನು ಹೂ ಹಿಡಿದು ಹೊತ್ತು ತಂದು ನಿಮ್ಮ ಮುಂದೆ ನಿಲ್ಲಸಿದಾಗ ಅನ್ನಿಸಿದ್ದು
ನಿಂತಿರುವುದು ನಿಮ್ಮ ಉಸಿರಷ್ಟೇ
ನಿಮ್ಮ ಹೃದಯವಿನ್ನು ಬಡಿಯುತ್ತಲೇ ಇದೆ.
ನಮ್ಮ ಹೃದಯದ ಬಡಿತದೊಂದಿಗೆ..
ಮಾನವೀಯತೆ ಪಾಠ ಹೇಳಿ ಹೋದ ಅಪ್ಪು
ಇಂದೋ ನಾಳೆ ಎನ್ನುತ್ತಿರುವ ಹಿರಿಯ ಜೀವಿಗಳ ಹೊತ್ತು ತಂದು ನಿಮ್ಮ ದರ್ಶನ ಮಾಡಿಸಿ ನನ್ನ ಬಾರವ ಇಳಿಸಿಕೊಂಡಿರುವೆ.
ಹನಿಗೂಡಿದ ನನ್ನ ಕಂಗಳಿದ ನಿಮಗೆ ನಮಸ್ಕರಿಸುತ್ತ ನಾ ಹೇಳುವುದೊಂದೆ ಅಪ್ಪು,

ನಿಮಗೆ ಉಸಿರಿಲ್ಲ ಎಂಬುದು ಶುದ್ಧ ಸುಳ್ಳು.
ಪ್ರತಿಯೊಬ್ಬರ ಉಸಿರಲ್ಲೂ ನೀವಿದ್ದೀರಾ ಎಂಬುದೇ ಸತ್ಯ.
ನಿಮ್ಮ ಜನಸ್ನೇಹಿ ಯೋಗೇಶ್


Leave a Reply to pgbetvip Cancel reply